Safe Investment: Fixed Deposit Scheme || ಸುರಕ್ಷಿತ ಹೂಡಿಕೆ: ಸ್ಥಿರ ಠೇವಣಿ ಯೋಜನೆ

ಕಷ್ಟ ಪಟ್ಟು ದುಡಿದು, ಉಳಿತಾಯ ಮಾಡಿದ ಹಣವನ್ನ ಒಂದೆಡೆ ಸುರಕ್ಷಿತವಾಗಿ ಇಡಬೇಕು ಎಂಬ ಯೋಚನೆ ಬಂದೊಡನೆ, ತಕ್ಷಣವೇ ಬಾಯಿಗೆ ಬರುವ ಯೋಜನೆಯೆಂದರೆ, ಪಿಕ್ಸಡ್ ಡಿಪಾಸಿಟ್ ಸ್ಕೀಮ್.

ಪಿಕ್ಸಡ್  ಡಿಪಾಸಿಟ್ ನ್ನು ಅಚ್ಚ ಕನ್ನಡದಲ್ಲಿ ಸ್ಥಿರ ಠೇವಣಿ  ಅಥವಾ ನಿಶ್ಚಿತ ಠೇವಣಿ  ಅಂತ ಕರೆಯುತ್ತಾರೆ.

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಅಧ್ಯಯನದ ಪ್ರಕಾರ, ಸಮೀಕ್ಷೆಗೆ ಒಳಗಾದ 95% ಕುಟುಂಬಗಳು ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತವೆ ಎಂದು ಹೇಳಿದೆ.  ಮತ್ತೊಂದು ಅಧ್ಯಯನದ ಪ್ರಕಾರ, 2020 ರಲ್ಲಿ ಭಾರತೀಯ ಕುಟುಂಬಗಳ ಸ್ಥಿರ ಠೇವಣಿಯಿಂದ ಬ್ಯಾಂಕುಗಳಲ್ಲಿ ಸಂಗ್ರಹವಾಗಿರುವ ಒಟ್ಟು ಹಣ 46 ಟ್ರಿಲಿಯನ್  ಆಗಿತ್ತು ಎಂದಿದೆ. ಈ ಎರಡೂ ಅದ್ಯಯನಗಳು, ಪಿಕ್ಸಡ್ ಡಿಪಾಸಿಟ್ ಸ್ಕೀಮ್ ಎನ್ನುವುದು, ಭಾರತೀಯರ ಸಾಂಪ್ರದಾಯಿಕ ಉಳಿತಾಯ ಯೋಜನೆ ಎಂಬುದನ್ನು ಸಾಭೀತು ಪಡಿಸುತ್ತದೆ.

ಸ್ಥಿರ ಠೇವಣಿ ಯೋಜನೆ ಎಂದರೇನು?

ಸ್ಥಿರ ಠೇವಣಿ ಯೋಜನೆ ಎಂದರೆ ನೀವು ನಿಶ್ಚಿತ ಅವಧಿಗೆ ಮತ್ತು ಮೊದಲೇ ನಿಶ್ಚಯಿಸಿದ ಬಡ್ಡಿದರಕ್ಕೆ ನಿಮ್ಮ ಹಣವನ್ನು ಠೇವಣಿ ಇಡುತ್ತೀರಿ. ಅವಧಿ ಮುಗಿದ ನಂತರ, ನಿಮ್ಮ ಠೇವಣಿ ಹಣ ಮತ್ತು ಒಟ್ಟು ಬಡ್ಡಿಯ ಮೊತ್ತವನ್ನು ಜೊತೆಯಾಗಿ ಪಡೆಯುತ್ತೀರಿ.

ಉದಾಹರಣೆಗೆ, ನೀವು ವರ್ಷಕ್ಕೆ 7.65% ಬಡ್ಡಿದರಕ್ಕೆ ಮೂರು ವರ್ಷಗಳವರೆಗೆ 15 ಸಾವಿರ ರೂಪಾಯಿಗಳನ್ನು ಠೇವಣಿ ಮಾಡುತ್ತೀರಿ ಎಂದುಕೊಳ್ಳಿ, ಮೂರು ವರ್ಷಗಳ ನಂತರ, ನೀವು, ನಿಮ್ಮ ಠೇವಣಿ ಹಣ 15 ಸಾವಿರ ರೂಪಾಯಿ ಮತ್ತು ಮೂರು ವರ್ಷದ ಬಡ್ಡಿ 3829 ರೂಪಾಯಿಗಳು ಸೇರಿ ಒಟ್ಟು 18,829 ರೂಪಾಯಿ ಮೊತ್ತವನ್ನು ಪಡೆಯುತ್ತೀರಿ.

ಸ್ಥಿರ ಠೇವಣಿ ಯೋಜನೆಯ ಪ್ರಯೋಜನಗಳು ಯಾವವು?

ಗ್ಯಾರಂಟಿ ರಿಟರ್ನ್ಸ್: ಹಣವನ್ನು ಠೇವಣಿ ಇಡುವ ಸಂದರ್ಭದಲ್ಲಿಯೇ, ರೇಟ್ ಆಪ್ ಇಂಟರೆಸ್ಟ್ ಎಷ್ಟಿದೆ? ಎಂಬುದನ್ನು ತಿಳಿಸಿರುತ್ತಾರಾದ್ದರಿಂದ, ಇದು ಗ್ಯಾರಂಟಿ ರಿಟರ್ನ್ ಯೋಜನೆಯಾಗಿರುತ್ತದೆ.

ಬಂಡವಾಳ ಸಂರಕ್ಷಣೆ: ಸ್ಥಿರ ಠೇವಣಿ ಯೋಜನೆಯ, ಪ್ರತಿ ಠೇವಣಿದಾರನ, 5 ಲಕ್ಷದವರೆಗಿನ ಅಸಲು ಮತ್ತು ಬಡ್ಡಿ ಹಣಕ್ಕೆ, ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ ಅಂಗಸಂಸ್ಥೆಯಾದ,  ಡಿಪಾಸಿಟ್ ಇನ್ಸುರನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ (DICGC).. ಸಂಸ್ಥೆ ಮಿಮೆಯನ್ನು ಒದಗಿಸುತ್ತದೆ. ಯಾವುದೇ ಸಂದರ್ಭದಲ್ಲಿ ಬ್ಯಾಂಕ್ ಗಳಲ್ಲಿ ಅವಘಡಗಳು ಸಂಭವಿಸಿದರೆ, ಈ ಡಿಐಸಿಜಿಸಿ ಸಂಸ್ಥೆ, ಠೇವಣಿದಾರರ ಹಣಕ್ಕೆ ಜವಾಬ್ದಾರಿಯಾಗಿ, ಹಣವನ್ನು ಪಾವತಿಸುತ್ತದೆ.

ಸ್ಥಿರ ಬಡ್ಡಿ ದರಗಳು: ಬಡ್ಡಿ ದರ ಮುಂಚಿತವಾಗಿ ನಿಗಧಿಯಾಗಿರುತ್ತದೆ. ಇದರಿಂದ ದೇಶದ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಾಗುವ ಆರ್ಥಿಕ ಸ್ಥಿತಿಯ ಏರಿಳಿತಗಳ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಕಾಲಾವಧಿಯ ಆಯ್ಕೆ: ಠೇವಣಿ ಹಣದ ಕಾಲಾವಧಿಯ ಆಯ್ಕೆ, ಠೇವಣಿದಾರರ ನಿರ್ಧಾರವೇ ಆಗಿರುತ್ತದೆ. ಸ್ಥಿರ ಠೇವಣಿ ಯೋಜನೆಯಲ್ಲಿ, ಸಹಜವಾಗಿ ಕನಿಷ್ಟ 7 ದಿನಗಳಿಂದ 10 ವರ್ಷಗಳವರೆಗೆ, ಹಣವನ್ನು ಠೇವಣಿ ಇಡಬಹುದಾಗಿರುತ್ತದೆ. ಈ ಕಾಲಾವಧಿ ಕೆಲ ಬ್ಯಾಂಕ್ ಗಳಲ್ಲಿ ಹೆಚ್ಚು-ಕಡಿಮೆಯಾಗಿಯೂ ಇರಬಹುದು.

ಸ್ಥಿರ ಠೇವಣಿ ಮಾಡುವುದು ಮತ್ತು ನಿರ್ವಹಿಸುವುದು ಸುಲಭ: ಸ್ಥಿರ ಠೇವಣಿ ಖಾತೆ ತೆರೆಯಲು, ಬ್ಯಾಂಕುಗಳು ಒದಗಿಸುವ ಒಂದು ಫಾರ್ಮನ್ನು ಭರ್ತಿ ಮಾಡಬೇಕು. ಜೊತೆಗೆ ಖಡ್ಡಾಯವಾಗಿ ಪ್ಯಾನ್ ಕಾರ್ಡ್, ಮತ್ತು ವ್ಯಕ್ತಿಯ ಗುರುತಿನ ಚೀಟಿ, ವಿಳಾಸಕ್ಕೆ  ಸಂಭಂದಿಸಿದ ಯಾವುದಾದರೊಂದು ಯುಟಿಲಿಟಿ ಬಿಲ್ ನ್ನು ಒದಗಿಸಬೇಕಾಗುತ್ತದೆ. ಠೇವಣಿ ಹಣವನ್ನು ನಗದು, ಸೇವಿಂಗ್ಸ್ ಅಕೌಂಟ್, ಇಲ್ಲವೇ ಯುಪಿಐ  ಮುಖಾಂತರ ಜಮಾ ಮಾಡಬಹುದಾಗಿರುತ್ತದೆ. ತದನಂತರ, ಬ್ಯಾಂಕುಗಳು ನೀಡುವ ಪ್ರಮಾಣ ಪತ್ರವನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಬೇಕು. ‍ ಸ್ಥಿರ ಠೇವಣಿ ಮ್ಯಾಚ್ಯುರಿಟಿಯ ನಂತರ, ಒಟ್ಟು ಅಸಲು ಮತ್ತು ಬಡ್ಡಿಯ ಹಣ ನಿಮ್ಮ ಖಾತೆಗೆ ಜಮೆಯಾಗಿರುತ್ತದೆ.

ಸ್ಥಿರ ಠೇವಣಿ ಯೋಜನೆಗಳಲ್ಲಿರುವ ವೈವಿದ್ಯತೆ: ಸ್ಥಿರ ಠೇವಣಿ ಯೋಜನೆಯಲ್ಲಿಯೂ ವಿಧಗಳಿದ್ದು, ಅವುಗಳಲ್ಲಿ ಗ್ರಾಹಕರು ತಮಗಿಷ್ಟವಾಗುವ, ಅಥವಾ ಅವಶ್ಯವಿರುವ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದೆ. ಉದಾಹರಣೆಗೆ, ತೆರಿಗೆ ಉಳಿಸುವ ಸ್ಥಿರ ಠೇವಣಿಗಳು, ಹಿರಿಯ ನಾಗರಿಕ ಸ್ಥಿರ ಠೇವಣಿ,  ಫ್ಲೆಕ್ಸಿ ಫಿಕ್ಸೆಡ್ ಡೆಪಾಸಿಟ್‌ಗಳು, ನಿಯಮಿತ ಆದಾಯದ ಸ್ಥಿರ ಠೇವಣಿಗಳು, ಕಾರ್ಪೊರೇಟ್ ಸ್ಥಿರ ಠೇವಣಿಗಳು, ಇತ್ಯಾದಿ, ಇತ್ಯಾದಿ…

ಅನಿವಾಸಿ ಭಾರತೀಯರು(Non Resident Indians), ಭಾರತೀಯ ಮೂಲದ ವ್ಯಕ್ತಿಗಳು (Person of Indian Origin) , ಮತ್ತು ಭಾರತದ ಸಾಗರೋತ್ತರ ನಾಗರಿಕರು(Overseas Citizen Of India) ತಮ್ಮ ಹಣವನ್ನು, ಭಾರತೀಯ ಹಣಕಾಸು ಸಂಸ್ಥೆಗಳಲ್ಲಿ, ಸ್ಥಿರ ಠೇವಣಿ ಇಡಬಹುದಾಗಿದ್ದು, ಅವರಿಗಾಗಿಯೇ ಸಿದ್ದಪಡಿಸಿದ ವಿಶೇಷ ಸ್ಥಿರ ಠೇವಣಿ ಯೋಜನೆಗಳೂ ಇವೆ.

ಸಾಲ ಸೌಲಭ್ಯಗಳು: ಅಕಾಲಿಕವಾಗಿ ಹಣದ  ಅಗತ್ಯ ಬಂದರೆ, ಸ್ಥಿರ ಠೇವಣಿ ಯೋಜನೆಯಡಿಯಲ್ಲೇ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಹಿರಿಯ ನಾಗರಿಕರ ಪ್ರಯೋಜನಗಳು: 60 ವರ್ಷ ಮೇಲ್ಪಟ್ಟವರನ್ನು, ಹಿರಿಯನಾಗರಿಕರೆಂದು ಪರಿಗಣಿಸಿ, ಬ್ಯಾಂಕುಗಳು ಸ್ಥಿರ ಠೇವಣಿ ಯೋಜನೆಗಳಲ್ಲಿ ಒಂದಿಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಅದನ್ನು ಸಿನಿಯರ್ ಸಿಟಿಜನ್ ಸ್ಥಿರ ಠೇವಣಿ ಯೋಜನೆ ಎಂದು ಕರೆಯಲಾಗುತ್ತದೆ.

ಸ್ಥಿರ ಠೇವಣಿ ಯೋಜನೆ ಆಯ್ಕೆಮಾಡುವಾಗ ಪರಿಗಣಿಸಬೇಕಾದ ಅಂಶಗಳು,

ಬಡ್ಡಿ ದರ : ವಿವಿಧ ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ದೊರೆಯುವ ಬಡ್ಡಿದರಗಳನ್ನು ಹೋಲಿಸುವ ಮೂಲಕ ಉತ್ತಮವಾದದ್ದನ್ನ ಆರಿಸಿಕೊಳ್ಳಿ, ಏಕೆಂದರೆ ಅದು ನಿಮ್ಮ ಹೂಡಿಕೆಯ ಮೇಲೆ ಉತ್ಪತ್ತಿಯಾಗುವ ಆದಾಯಕ್ಕೆ ಭಾರಿ ವ್ಯತ್ಯಾಸವನ್ನು ಉಂಟುಮಾಡುತ್ತದೆ.

ಲಾಕ್ ಇನ್ ಕಾಲಾವಧಿ: ಪರಿಗಣಿಸಬೇಕಾದ ಇನ್ನೊಂದು ಅಂಶವೆಂದರೆ ಕಾಲಾವಧಿ. ನಿಮ್ಮ ಹೂಡಿಕೆಯಿಂದ ಗರಿಷ್ಠ ಲಾಭವನ್ನು ಗಳಿಸಬೇಕೆಂದರೆ, ನಿಮ್ಮ ಹಣವನ್ನು ಮೆಚ್ಯೂರಿಟಿ ಅವಧಿಯವರೆಗೆ ಹೂಡಿಕೆಯಲ್ಲಿ ಉಳಿಸಬೇಕಾಗುತ್ತದೆ. ಆದ್ದರಿಂದ, ಕಾಲಾವಧಿಯನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ.

ಬಡ್ಡಿ ಪಾವತಿ ಆಯ್ಕೆ: ಭಾರತದಲ್ಲಿ ಸ್ಥಿರ ಠೇವಣಿ ಬಡ್ಡಿ ದರಗಳನ್ನು ಹೋಲಿಸಿದ ನಂತರ, ಬಡ್ಡಿಯ ಹಣವನ್ನು ಪಾವತಿಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಇದು ಮಾಸಿಕ, ತ್ರೈಮಾಸಿಕ, ವಾರ್ಷಿಕ ಅಥವಾ ಅರ್ಧ ವಾರ್ಷಿಕವಾಗಿರಬಹುದು. ಇಲ್ಲವೇ ಮ್ಯಾಚುರಿಟಿ ಅವಧಿಯ ನಂತರವೂ ಆಗಿರಬಹುದು.

ಪೆನಾಲ್ಟಿ ದರಗಳು: ನೀವು, ನಿಮ್ಮ ಹಣವನ್ನು ಸ್ಥಿರ ಠೇವಣಿಯಲ್ಲಿ ಹಾಕುವ ಮೊದಲು, ನೀವು ಅಕಾಲಿಕವಾಗಿ ಠೇವಣಿ ಮುರಿಯಲು ಬಯಸಿದರೆ, ಅದಕ್ಕೆ ತಗಲುವ ಪೆನಾಲ್ಟಿ ದರವನ್ನು ಪರಿಶೀಲಿಸಬೇಕು.

ಹಣಕಾಸು ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಿ : ಕೇವಲ ಬಡ್ಡಿ ದರಗಳನ್ನು ನೋಡಿ ಸುಮ್ಮನೆ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಹಣವನ್ನು ಹಾಕುವ ಮೊದಲು ಹಣಕಾಸು ಸಂಸ್ಥೆಯ ಬಗ್ಗೆ ಸಂಶೋಧನೆ ನಡೆಸಿ. ಆ ಸಂಸ್ಥೆಯ ಇತಿಹಾಸ, ಹಣಕಾಸು ಸ್ಥಿತಿ-ಗತಿಗಳ ಬಗ್ಗೆ ತಿಳಿದುಕೊಳ್ಳಿ.

FD ಸ್ಕೀಮ್ ಅನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ:

  • ರಿಸರ್ವ ಬ್ಯಾಂಕ್ ಆಪ್ ಇಂಡಿಯಾ ದಿಂದ ಮಾನ್ಯತೆ ಪಡೆದ, ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು, ಪ್ರೈವೆಟ್ ಸೆಕ್ಟರ್ ಬ್ಯಾಂಕುಗಳು, ಕೋ-ಆಪರೇಟಿವ್ ಬ್ಯಾಂಕ್ ಗಳು, ನಾನ್ ಬ್ಯಾಂಕಿಂಗ್ ಪೈನಾನ್ಸ್ ಕಂಪನಿಗಳು, ಭಾರತದಾದ್ಯಂತ ಇರುವ ಎಲ್ಲ ಪೋಸ್ಟ್ ಆಫೀಸ್ಗಳು  ನಿಶ್ಚಿತ ಠೇವಣಿ ಯೋಜನೆಗಳನ್ನು ಒದಗಿಸುತ್ತವೆ.
  • ನಿಮ್ಮ ಹಣವನ್ನು ಸ್ಥಿರ ಠೇವಣಿ ಮಾಡಲು, ಆಯ್ದುಕೊಳ್ಳುವ ಬ್ಯಾಂಕುಗಳಲ್ಲಿ, ನೀವು ಸೇವಿಂಗ್ಸ್ ಅಕೌಂಟ್ ಅಥವಾ ಕರೆಂಟ್ ಅಕೌಂಟ್ ಹೊಂದಿರುಬೇಕು ಎನ್ನುವುದು, ಖಡ್ಡಾಯವಲ್ಲ.
  • ನೀವು ವಾಸಿಸುವ ಊರು, ನಗರ, ಪಟ್ಟಣಗಳಲ್ಲಿರುವ, ಬ್ಯಾಂಕುಗಳಲ್ಲಿ ಮಾತ್ರವೇ ಸ್ಥಿರ ಠೇವಣಿ ಮಾಡಬೇಕೆಂಬುದು ತಪ್ಪು ಕಲ್ಪನೆಯಾಗಿದ್ದು, ನಿಮಗೆ ಒಳ್ಳೆಯ ಬಡ್ಡಿ ದರವನ್ನು ನೀಡುವ ಯಾವುದೇ ಬ್ಯಾಂಕಿನ, ಹತ್ತಿರದ ಬ್ರ್ಯಾಂಚುಗಳಿಗೆ ಬೇಟಿನೀಡಿ ಅಥವಾ ಆನ್ ಲೈನ್ ಅಪ್ಲಿಕೇಷನ್ ಗಳ ಮುಖಾಂತರ ಸ್ಥಿರ ಠೇವಣಿ ಖಾತೆಯನ್ನು ತೆರೆಯಬಹುದು.
  • ಸ್ಟೇಬಲ್ ಮನಿ (Stablemoney) ಎಂಬ ಆ್ಯಪ್ ಮುಖಾಂತರ, ನೀವು ಕುಳಿತಲ್ಲಿಯೇ, ನಿಮಗೆ ಬೇಕಾದ, ಹಣಕಾಸು ಸಂಸ್ಥೆಗಳಲ್ಲಿ ಸ್ಥಿರ ಠೇವಣಿ ಖಾತೆ ತೆರೆಯಬಹುದು. ಸ್ಟೇಬಲ್ ಮನಿ ಎಲ್ಲ ಬ್ಯಾಂಕುಗಳು ಮತ್ತು ಎನ್.ಬಿ.ಎಪ್.ಸಿ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಸ್ಥಿರ ಠೇವಣಿ ಯೋಜನೆಗೆ ಸಂಭಂದಿಸಿದ ಎಲ್ಲ ಮಾಹಿತಿಗಳನ್ನು, ತನ್ನ ಆ್ಯಪ್ ನಲ್ಲಿ ತೋರಿಸುತ್ತದೆ.  ಗ್ರಾಹಕರು ಎಲ್ಲ ಬ್ಯಾಂಕುಗಳ ಬಡ್ಡಿದರಗಳನ್ನು, ಇತರೆ ಮಾಹಿತಿಯನ್ನು ಪರಿಶೀಲಿಸಿ, ತಮ್ಮ ಆಯ್ಕೆಯ ಹಣಕಾಸು ಸಂಸ್ಥೆಯಲ್ಲಿ ಸ್ಥಿರ ಠೇವಣಿ ಖಾತೆ ತರೆಯಬಹುದಾಗಿರುತ್ತದೆ.
  • ಸ್ಟೇಬಲ್ ಮನಿ ಆ್ಯಪ್ ನಲ್ಲಿ ತೋರಿಸುವ ಎಲ್ಲ ಹಣಕಾಸು ಸಂಸ್ಥೆಗಳು ಡಿ.ಐ.ಸಿ.ಜಿ.ಸಿ ನೊಂದಿಗೆ ವಿಮೆ ಮಾಡಿಸಿಕೊಂಡಿರುತ್ತವೆ. ಆದ್ದರಿಂದ ಈ ಆ್ಯಪ್ ಮುಖಾಂತರ ಮಾಡುವ ವ್ಯವಹಾರದಲ್ಲಿ,  ಗ್ರಾಹಕರ 5 ಲಕ್ಷದ ವರೆಗಿನ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ಯಾವುದೇ ತೊಂದರೆ ಇರುವುದಿಲ್ಲ.
  • ಸ್ಟೇಬಲ್ ಮನಿ ಆ್ಯಪ್ ಮುಖಾಂತರ, ಗ್ರಾಹಕರು, ತಮ್ಮ ಒಂದೇ, ಒಂದು ಸೇವಿಂಗ್ಸ್ ಅಕೌಂಟ್ ನಿಂದ, ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಹಣಕಾಸು ಸಂಸ್ಥೆಗಳಲ್ಲಿ ಸ್ಥಿರ ಠೇವಣಿ ಖಾತೆ ತೆರೆಯಬಹುದು.  ಸ್ಥಿರ ಠೇವಣಿ ಫಾರ್ಮ ತುಂಬುವುದು, ಹಣವನ್ನು ಸೇವಿಂಗ್ ಅಕೌಂಟ್ ನಿಂದ ಸ್ಥಿರ ಠೇವಣಿ ಖಾತೆಗೆ ವರ್ಗಾಯಿಸುವುದು, ಇ-ಕೆವೈಸಿ ಮಾಡುವುದು, ಎಲ್ಲವೂ ಆನ್ ಲೈನ್ ಮುಖಾಂತರವೇ ಮಾಡಬಹುದಾಗಿರುತ್ತದೆ.

ಕೊನೆಯ ಮಾತು: ಸ್ಥಿರ ಠೇವಣಿಗಳನ್ನು ಸಾಂಪ್ರದಾಯಿಕ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಅವು ಕಡಿಮೆ ಅಪಾಯವನ್ನು ಹೊಂದಿರುತ್ತವೆ ಮತ್ತು ಗ್ಯಾರಂಟಿ ಆದಾಯವನ್ನು ನೀಡುತ್ತವೆ. ನಿಮ್ಮ ಹಣವನ್ನು, ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಿ. ಜಾಣ್ಮೆಯ ಆಯ್ಕೆಯನ್ನು ಮಾಡಿ ಮತ್ತು ಅತ್ಯುತ್ತಮ ಬಡ್ಡಿಯ ದರದಿಂದ ಒಳ್ಳೆಯ ಲಾಭಾಂಶವನ್ನು ಪಡೆಯಿರಿ.

× Click to WhatsApp