ವರ್ತಮಾನದಲ್ಲಿ ಒಂದೇ ಆಧಾಯ ಮೂಲವನ್ನು ನಂಬಿ ಬದುಕೋದು ಕಷ್ಟದಾಯಕವಾಗಿದೆ. ಕಾರಣ ಏರುತ್ತಿರುವ ಹಣದುಬ್ಬರ. ಹಣದುಬ್ಬರ ಎಂದರೆ, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಅಥವಾ ಸೇವೆಗಳ ದರದಲ್ಲಿ ಆಗುವ ಬೆಲೆಹೆಚ್ಚಳ ಎನ್ನಬಹುದು. ನಾವುಗಳು ವರ್ಷಪೂರ್ತಿ ಒಂದೇ ಸಂಬಳಕ್ಕೆ ದುಡಿಯುತ್ತೇವೆ. ವರ್ಷಕ್ಕೊಂದು ಬಾರಿ ಸಂಬಳದಲ್ಲಿ ಹೆಚ್ಚಳವಾಗುತ್ತದೆ. ಆದರೆ ಮಾರ್ಕೆಟ್ ನಲ್ಲಿ ಅಗತ್ಯ ಸೇವೆಗಳ ಮತ್ತು ವಸ್ತುಗಳ ಬೆಲೆಗಳು ನಾಲ್ಕೈದು ಬಾರಿ ಹೆಚ್ಚಳವಾಗಿರುತ್ತವೆ. ನಮ್ಮ ಸಂಬಳದಲ್ಲಾದ ಏರಿಕೆ, ಮಾರುಕಟ್ಟೆಯಲ್ಲಾದ ಬೆಲೆ ಏರಿಕೆಗಳಿಗೆ ಅಜಗಜಾಂತರ ವ್ಯತ್ಯಾಸವಿರುತ್ತದೆ. ಹೀಗಾಗಿ ಒಂದೇ ಆಧಾಯವನ್ನು ನಂಬಿಕೊಂಡು, ಬದುಕೆಂಬ ಜಟಕಾಬಂಡಿಯನ್ನು ನೂಕುವುದು ಕಷ್ಟದ ಕೆಲಸವಾಗುತ್ತದೆ. ಹಾಗಂತ ಇರುವ ಕೆಲಸವನ್ನ ಬಿಟ್ಟು, ಬ್ಯುಸಿನೆಸ್, ಅಥವಾ ಇನ್ನೇನೋ ಮಾಡಲಿಕ್ಕೆ ಹೋದರೂ, ಅದರಲ್ಲಿ ರಿಸ್ಕ್ ತುಂಬಾ ಜಾಸ್ತಿಯಾಗಿರುತ್ತದೆ. ಇದಕ್ಕೆ ಇರುವುದು ಒಂದೇ ದಾರಿ.. ಅದುವೇ ಹೆಚ್ಚುವರಿ ಆಧಾಯದ ಮೂಲವನ್ನು ಸೃಷ್ಠಿಸುವುದು.
ಇಲ್ಲಿ ನಾನು ಬಳಸುತ್ತಿರುವ “ಹೆಚ್ಚುವರಿ ಆಧಾಯ” ಎಂಬ ಶಬ್ಚವನ್ನ ಕಂಗ್ಲೀಷ್(ಕನ್ನಡ-ಇಂಗ್ಲೀಷ್)ನಲ್ಲಿ “ಪ್ಯಾಸಿವ್ ಇನ್ಕಮ್ಮು” ಅಂತಲೂ ಕರಿಬಹುದು.
ಗೆಳೆಯರೆ, ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಹೆಚ್ಚುವರಿ ಆಧಾಯವನ್ನ ಸೃಷ್ಠಿ ಮಾಡಲಿಕ್ಕೆ, ನಿಮ್ಮ ನಿತ್ಯ ಉದ್ಯೋಗಕ್ಕೆ ಯಾವುದೇ ತೊಂದರೆ ಮಾಡಿಕೊಳ್ಳದೇ, ನಿಮ್ಮ ಉದ್ಯೋಗ ಅಥವಾ ಕೆಲಸದ ನಂತರ ಉಳಿಯುವ ಸಮಯವನ್ನು ಬಳಸಿಕೊಳ್ಳಬಹುದು. ಹೆಚ್ಚುವರಿ ಆಧಾಯಕ್ಕೆ ದಾರಿ ಮಾಡಿಕೊಡುವ ಸಾಕಷ್ಟು ಮಾರ್ಗಗಳಿವೆ. ಅವುಗಳಲ್ಲಿ ಕೇವಲ 4 ಮಾರ್ಗಗಳನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇನೆ.
1. ನಿಮ್ಮಲ್ಲಿರುವ ಕೌಶಲ್ಯಗಳನ್ನು ಉಪಯೋಗಿಸಿಕೊಳ್ಳಿ
ಗೆಳೆಯರೆ, ಒಬ್ಬೊಬ್ಬರಲ್ಲಿ ಒಂದೊಂದು ವಿಷೇಶತೆ ಇರುತ್ತದೆ. ಇಲ್ಲಿ ಕೌಶಲ್ಯವೆಂದರೆ, ಯಾವ ಕೆಲಸವನ್ನ ಹೆಚ್ಚು ಅಚ್ಚುಕಟ್ಟಾಗಿ, ಮನಸ್ಸಿಟ್ಟು ಮಾಡುತ್ತೀರಿ, ಅಥವಾ ಯಾವುದರಲ್ಲಿ ನಿಮಗೆ ಅರಿವು ಅಂದರೆ ‘ಜ್ಞಾನ’ ಜಾಸ್ತಿ ಇದೆಯೋ ಅದುವೇ ನಿಮ್ಮ ಕೌಶಲ್ಯವಾಗಿರುತ್ತದೆ.
ನೀವು ಚೆಂದವಾಗಿ ಮೆಹಂದಿ ಹಾಕುವುದಲ್ಲಿ ಎಕ್ಸ್ಪರ್ಟ್ ಆಗಿದ್ದರೆ, ಮದುವೆ ಮತ್ತಿತ್ತರ ಸಮಾರಂಭಗಳಿಗೆ ಹೋಗಿ, ಮೆಹಂದಿ ಹಾಕುತ್ತಾ ಮೆಹಂದಿ ಡಿಜೈನರ್ ವೃತ್ತಿಯನ್ನ ಆರಂಭಿಸಬಹುದು. ನಿಮಗೆ ಟೀಚಿಂಗ್ ನಲ್ಲಿ ಆಸಕ್ತಿ ಇದ್ದರೆ, ನಿಮ್ಮ ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಗಳನ್ನ ಹೇಳಿಕೊಡಬಹುದು. ಇಂಗ್ಲೀಷ್ ಭಾಷೆಯ ಮೇಲೆ ನಿಮಗೆ ಹಿಡಿತ ಇದ್ದರೆ, ವಿಧ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಗಳನ್ನ ಹೇಳಿಕೊಡಬಹುದು. ಹೀಗೆಯೆ ಗಣಿತ, ವಿಜ್ಞಾನ, ಅಥವಾ ಇತರೆ ಭಾಷೆಗಳಾದ ಹಿಂದಿ, ಸಂಸ್ಕೃತ ಎಲ್ಲ ವಿಷಯಗಳ ಮೇಲೆ ನೀವು ಟ್ಯೂಷನ್ ಕ್ಲಾಸ್ ಗಳನ್ನ ತೆರೆಯಬಹುದು.
ನಿಮ್ಮಲ್ಲಿ ಬೇರೊಬ್ಬರಿಗೆ ಉಪಯೋಗವಾಗುವ, ಯಾವ ಕೌಶಲ್ಯವಿದೆ ಎಂಬುದನ್ನ ತಿಳಿದು, ಅದರಿಂದ ಆಧಾಯ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿ. ಒಂದು ವೇಳೆ, ನಿಮ್ಮಲ್ಲಿ ಅಂತಹ ಯಾವುದೇ ಕೌಶಲ್ಯಗಳು ಇಲ್ಲ ಅಂತಾದರೆ, ತರಬೇತಿ ಕೇಂದ್ರಗಳ ಮೂಲಕ ಯಾವುದಾದರೊಂದು ಕೌಶಲ್ಯವನ್ನು ಪಡೆದುಕೊಳ್ಳಿ. ಉದಾಹರಣೆಗೆ, ಡ್ರೈವಿಂಗ್, ಕಂಪ್ಯೂಟರ್ ಶಿಕ್ಷಣ, ಟೆಲರಿಂಗ್, ಎಂಬ್ರಾಯಿಡರಿ, ಮೆಹಂದಿ ಡಿಸೈನಿಂಗ್, ಬ್ಯುಟಿ ಪಾರ್ಲರ್, ಟ್ಯಾಟು ಹಾಕುವ ತರಬೇತಿ, ಮೋಬೈಲ್ ರಿಪೇರಿ, ಮುಂತಾದವುಗಳಲ್ಲಿ ಕೌಶಲ್ಯಗಳನ್ನ ಪಡೆದುಕೊಂಡು, ಅದರಿಂದ ಒಂದೊಳ್ಳೆ ಹೆಚ್ಚುವರಿ ಆಧಾಯವನ್ನ ಸಂಪಾಧಿಸಬಹುದು.
2. ನಿಮ್ಮ ಆಸ್ತಿಯನ್ನ ದುಡಿಸಿಕೊಳ್ಳಿ.
ಗೆಳೆಯರೆ, ನಿಮ್ಮದೊಂದು ಮನೆಯಿದ್ದು, ಅದರಲ್ಲಿ ನಿಮಗೆ ಅಗತ್ಯವಿರುಷ್ಟು ಬಳಸಿಕೊಂಡು, ಉಳಿದದ್ದನ್ನ ಬಾಡಿಗೆಗೆ ಕೊಡಬಹುದಾ! ಅಂತಾ ಯೋಚಿಸಿ ಅಥವಾ ನಿಮ್ಮಲ್ಲೊಂದಿಷ್ಟು ಪ್ಲಾಟು, ದುಡ್ಡು ಇದ್ದರೆ, ಮನೆಕಟ್ಟಿಸಿ, ಬಾಡಿಗೆ ಕೊಡಬಹುದು. ಕೆಲವು ವರ್ಷಗಳಲ್ಲಿ ನಿಮ್ಮ ಮನೆ ನಿರ್ಮಾಣಕ್ಕೆ ವ್ಯಯಿಸಿದ ಹಣ ಹಿಂದಿರುಗುವುದಲ್ಲದೇ, ನಂತರ ದಿನಗಳಲ್ಲಿ ನಿಮಗೊಂದು ಹೆಚ್ಚುವರಿ ಆಧಾಯವಾಗಿ ಪರಿವರ್ತಿತವಾಗುವುದು. ಹಾಗೆಯೇ, ನಿಮ್ಮ ಸ್ವಂತ ಬಳಕೆಗೆ ಅಂತ ಕಾರು ಇಟ್ಟುಕೊಂಡಿದ್ದರೆ, ನಿಮಗೆ ಅವಶ್ಯವಿರದ ಸಂದರ್ಭದಲ್ಲಿ ಅದನ್ನ ಬಾಡಿಗೆಗೆ ಬಿಡಬಹುದು. ನಿಮ್ಮಲ್ಲಿ ಯಾವುದಾದರೊಂದು ಬೆಲೆಬಾಳುವ ವಸ್ತು ಇದ್ದರೆ, ಅದನ್ನ ಅವಶ್ಯವಿದ್ದವರಿಗೆ ಬಾಡಿಗೆಗೆ ಕೊಟ್ಟು, ದುಡಿಸಿಕೊಳ್ಳಬಹುದು. ಉದಾಹರಣೆ, ನನ್ನ ಗೆಳೆಯನ ಹತ್ತಿರವಿರುವ ಹೈ ರೆಸ್ಯೂಲ್ಯುಶನ್ ಕ್ಯಾಮೆರಾವೊಂದನ್ನ ಅಗತ್ಯವಿರುವವರಿಗೆ, ಎರಡು ದಿನಕ್ಕೆ, ಮೂರು ದಿನಕ್ಕೆ, ಒಂದು ವಾರಕ್ಕೆ ಇಂತಿಷ್ಟು ಹಣವನ್ನ ನಿಗದಿ ಮಾಡಿ ಬಾಡಿಗೆಗೆ ಕೊಡುತ್ತಿರುತ್ತಾನೆ. ಕ್ಯಾಮೆರಾ ಸೆಕ್ಯೂರಿಟಿಗೆ ಅಂತಾ ಒಂದಿಷ್ಟು ಹಣವನ್ನ ಮುಂಚಿತವಾಗಿ ಪಡೆದಿರುತ್ತಾನಾದ್ದರಿಂದ ಕ್ಯಾಮೆರಾ ಬಳಕೆದಾರರ ಬಗ್ಗೆ ಹೆಚ್ಚು ಯೋಚಿಸದೇ, ಬಾಡಿಗೆ ವ್ಯವಹಾರ ಮಾಡುತ್ತಾ, ಒಂದೊಳ್ಳೆ ಆಧಾಯ ಮಾರ್ಗವನ್ನು ಸೃಷ್ಠಿಸಿಕೊಂಡಿದ್ದಾನೆ.
3. ನಿಮ್ಮ ಉಳಿತಾಯದ ಹಣವನ್ನು ದುಡಿಸಿಕೊಳ್ಳಿ.
ಗೆಳೆಯರೆ, ಭವಿಷ್ಯದಲ್ಲಿ ನಿಮ್ಮ ದುಡಿಯುವ ಶಕ್ತಿ ಕುಂದಿದಾಗ, ಆರೋಗ್ಯ ಕೈಕೊಟ್ಟಾಗ, ಅನಿರೀಕ್ಷಿತ ಘಟನೆಗಳು ನಡೆದಾಗ ಅವುಗಳನ್ನ ನಿಭಾಯಿಸಲು ಒಂದಷ್ಟು ಹಣವನ್ನ ನಿಮ್ಮ ಭವಿಷ್ಯತ್ತಿಗಾಗಿಯೇ ಕಾಯ್ದಿರಿಸಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ಉಳಿತಾಯದ ಹಣವನ್ನ ಭವಿಷ್ಯತ್ತಿಗಾಗಿ ಇರುವ ಲೈಪ್ ಇನ್ಸುರನ್ಸ್, ಹೆಲ್ತ್ ಇನ್ಸುರನ್ಸ್, ಟರ್ಮ್ ಇನ್ಸುರನ್ಸ್ ಸೇರಿದಂತೆ ಇತರೆ ಇನ್ವೆಸ್ಟ್ ಮೆಂಟ್ ಯೋಜನೆಗಳಲ್ಲಿ ತೊಡಗಿಸಬೇಕಾಗುತ್ತದೆ. ಇನ್ಸುರನ್ಸ್ ಗಳು ನಿಮ್ಮನ್ನು ಅಥವಾ ನಿಮ್ಮ ಕುಟುಂಬವನ್ನು ಅನಿರಿಕ್ಷೀತ ಘಟನೆಗಳಾದ ನಿಮ್ಮನ್ನ ಸೆಕ್ಯುರ್ ಮಾಡುತ್ತವೆ. ಹಾಗೆಯೇ, ನಿಮ್ಮ ನಿವೃತ್ತಿ ನಂತರದ ಬದುಕನ್ನ ಸಾಗಿಸಲು, ಇನ್ವೆಸ್ಟ್ ಮೆಂಟ್ ಯೋಜನೆಗಳಿಂದ ಬರುವ ಆಧಾಯ ಸಹಾಯಕವಾಗುತ್ತದೆ. ನಿಮ್ಮ ಉಳಿತಾಯದ ಹಣವನ್ನ ಕೇವಲ ಬ್ಯಾಂಕ್ಗಳಲ್ಲಿ ಇಟ್ಟರೆ, ಆ ಹಣಕ್ಕೆ ಬ್ಯಾಂಕುಗಳು ನೀಡುವ ರಿಟರ್ನ ಇಂಟರೆಸ್ಟ್ ತುಂಬಾ-ತುಂಬಾ ಕಡಿಮೆಯಾಗಿರುತ್ತದೆ. ಅದೇ ಉಳಿತಾಯದ ಹಣವನ್ನ ಮುಚುವಲ್ ಪಂಡ್ಸ್ ಗಳಲ್ಲಿ, ಸ್ಟಾಕ್ ಮಾರ್ಕೆಟ್ ಶೇರ್ ಗಳಲ್ಲಿ , ಬಾಂಡ್ಸ್ ಗಳಲ್ಲಿ, ಇತರೆ ಇನ್ವೆಸ್ಟ್ ಮೆಂಟ್ ಯೋಜನೆಗಳಲ್ಲಿ ತೊಡಗಿಸಿದರೆ, ಖಂಡಿತ ಒಳ್ಳೆಯ ರಿಟರ್ನಗಳನ್ನ ಪಡೆಯಬಹುದು. ಇವುಗಳು ಕೂಡಾ ನಿಮಗೆ ಹೆಚ್ಚುವರಿ ಆಧಾಯದ ಮೂಲವಾಗಬಹುದು. ಆದರೆ ಯಾವುದೇ ಇನ್ಟೆಸ್ಟ್ ಮೆಂಟ್ ಯೋಜನೆಯಲ್ಲಿ, ನಿಮ್ಮ ಹಣವನ್ನ ತೊಡಗಿಸುವ ಮುನ್ನ ಆ ಯೋಜನೆಯ ಬಗ್ಗೆ ಅದ್ಯಯನ ಮಾಡಬೇಕು, ಇಲ್ಲವೇ ಆ ಕ್ಷೇತ್ರದಲ್ಲಿ ಪಳಗಿರುವ ನುರಿತ ತಜ್ಞರ ಸಲಹೆ ಪಡೆದು, ಇನ್ಟೆಸ್ಟ್ ಮೆಂಟ್ ಮಾಡುವ ಬಗ್ಗೆ ನಿರ್ಧರಿಸಬೇಕು.
4. ಇಂಟರ್ ನೆಟ್ ಅಪ್ಲಿಕೇಷನ್ ಗಳ ಮೂಲಕ ಸಂಪಾಧಿಸಿ.
ಇಂಟರ್ನೆಟ್ ಇಂದಿನ ಜಗತ್ತಿನಲ್ಲಿ ಸಾಮಾನ್ಯವಾಗಿ ಬಳಸುವ ಪದವಾಗಿದೆ ಮತ್ತು ಜನರ ದೈನಂದಿನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಇಂಟರ್ನೆಟ್ ನಲ್ಲಿಯೂ ಕೂಡಾ ಹೆಚ್ಚುವರಿ ಆಧಾಯ ತಂದುಕೊಡುವ ಅನೇಕ ದಾರಿಗಳಿವೆ. ಉದಾಹರಣೆಗೆ ಯುಟ್ಯೂಬ್ ಚಾನೆಲ್, ಬ್ಲಾಗ್, ಅಫಿಲಿಯೇಟ್ ಮಾರ್ಕೆಟಿಂಗ್ , ಇನ್ಸ್ಟಾಗ್ರಾಂ, ಫೇಸ್ ಬುಕ್, ಟೆಲಿಗ್ರಾಂ ಚಾನೆಲ್, ಎಕ್ಸ್ ಸೇರಿದಂತೆ ಇತರೆ ಅಪ್ಲಿಕೇಷನ್ ಗಳ ಮುಖಾಂತರ ಲಕ್ಷಾಂತರ ರೂಪಾಯಿಗಳನ್ನ ಸಂಪಾದಿಸುವ ಅವಕಾಶಗಳಿವೆ. ನಾವುಗಳು ಅವುಗಳನ್ನ ಕಲಿತು, ಅರಿತು ಕೆಲಸಮಾಡಬೇಕು. ಅಷ್ಟೇ.
ಕೊನೆಯ ಮಾತು:
ಗೆಳೆಯರೆ, ಹಣ ಸುಮ್ಮನೆ ಒಲಿಯುವುದಿಲ್ಲ, ಅದು ಸಮಯ ಮತ್ತು ನಿರಂತರ ಪರಿಶ್ರಮವನ್ನು ಬೇಡುತ್ತದೆ. ಈ ಲೇಖನದಲ್ಲಿ ತಿಳಿಸಿರುವ ಎಲ್ಲ ಮಾರ್ಗಗಳು, ನಿಮ್ಮನ್ನ ಶ್ರೀಮಂತಿಕೆಯ ಶಿಖರದೆತ್ತರಕ್ಕೆ ಕೊಂಡೊಯ್ಯಬಲ್ಲವು. ಆದರೆ ನಿಮ್ಮಲ್ಲಿ ಹಂಬಲ, ನಿರಂತರ ಪರಿಶ್ರಮ ಸೋಲನ್ನೊಪ್ಪಿಕೊಳ್ಳದೆ ಮುನ್ನೆಡೆಯುವ ಛಾತಿ ಇರಬೇಕಷ್ಟೆ. ಏನಂತಿರಾ! ನಿಮ್ಮ ಅನಿಸಿಕೆ- ಅಭಿಪ್ರಾಯಗಳನ್ನ ಕಮೆಂಟ್ ಗಳ ಮುಖಾಂತರ ತಿಳಿಸಿ.